Bharithiya Thiya Samaj celebrates 25th Death Anniversary of Shri Narayana Karthappa

ನಾರಾಯಣ ಕೆ. ಅವರ ಪುಣ್ಯತಿಥಿ ಆಚರಣೆ

 

Launch of Book on Shri Narayana Kartappa

ಮಂಗಳೂರು : ಭಾರತೀಯ ತೀಯಾ ಸಮಾಜದ ಸ್ಥಾಪಕ ಅಧ್ಯಕ್ಷ ಮುಂಬಯಿಯ ಉದ್ಯಮಿ, ಸಮಾಜ ಸೇವಕ ದಿ. ನಾರಾಯಣ ಕೆ. ಅವರ 25ನೆಯ ವರ್ಷದ ಪುಣ್ಯತಿಥಿಯನ್ನು ಆ. 5 ರಂದು ದೇಶದ ವಿವಿಧ ಕಡೆಗಳಿಂದ ಆಗಮಿಸಿದ ತೀಯಾ ಸಮುದಾಯದ ಗಣ್ಯರ ಉಪಸ್ಥಿತಿಯಲ್ಲಿ ಜಪ್ಪುವಿನ ಸಂಕಪ್ಪ ಸ್ಮಾರಕ ಸಭಾಗೃಹದಲ್ಲಿ ಆಚರಿಸಲಾಯಿತು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ತೀಯಾ ಸಮಾಜದ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು ವಹಿಸಿದ್ದು ತೀಯಾ ಸಮುದಾಯವು ಶೈಕ್ಶಣಿಕವಾಗಿ ಮೊದಲ್ಲಿಗಿಂತಲೂ ಮುಂದುವರಿದಿದೆ ಎನ್ನಲು ಸಂತೋಷವಾರುತ್ತಿದೆ ಎಂದರು. ಮುಂಬಯಿಯ ಉದ್ಯಮಿ ಕೃಷ್ಣ ಎನ್. ಉಚ್ಚಿಲ್ ಮಾತನಾಡುತ್ತಾ ಯುವ ಪೀಳಿಗೆಯು ತೀಯಾ ಸಮಾಜದ ಅಭಿವೃದ್ದಿ ಕಾರ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಕ್ರಿಯಾಶೀಲರಾಗುದರೊಂದಿಗೆ ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆಂದರು. ದಿ. ನಾರಾಯಣ ಕೆ. ಅವರ ಪುತ್ರಿ ಶ್ರೀಮತಿ ಸಾವಿತ್ರಿ ಅವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದು ನಾರಾಯಣ ಕೆ ಅವರ ಜೀವನ ಚರಿತ್ರೆ ’ತೀಯಾ ಕಿರಣ’ ವನ್ನು ಬಿಡುಗಡೆಗೊಳಿಸಿದರು.

 

ಈ ಸಂದರ್ಭದಲ್ಲಿ ಅಚ್ಚು ಬೆಳ್ಚಪ್ಪಾಡ, ಸುಬ್ಬ ಬೆಳ್ಚಪ್ಪಾಡ, ಕೋಳಾರ ಕೃಷ್ಣ ಬೆಳ್ಚಪ್ಪಾಡ, ಮುಂಬಯಿಯ ಕೃಷ್ಣ ಎನ್. ಉಚ್ಚಿಲ್, ಸುಹಾಸಿನಿ ಬಬ್ಬುಕಟ್ಟೆ, ಅವರನ್ನು ಸನ್ಮಾನಿಸಲಾಯಿತು.

 

ವೇದಿಕೆಯಲ್ಲಿ ಭಾರತೀಯ ತೀಯಾ ಸಮಾಜದ ಮಾಜಿ ಕಾರ್ಯದರ್ಶಿ ಕೆ. ಜನಾರ್ಧನ ಕಾಸರಗೋಡು, ಭಗವತೀ ಬ್ಯಾಂಕಿನ ಮಾಜಿ ಅಧ್ಯಕ್ಷ ಬಾಲಕೃಷ್ಣ ಸುವರ್ಣ, ರೋಶನಿ ನಿಲಯದ ಉಪನ್ಯಾಸಕ ಮಾಧವ ಬಿ. ಎಮ್., ನಿಕಟಪೂರ್ವ ಅಧ್ಯಕ್ಷ ಎಂ.  ಗೋಪಾಲ, ಬಂದ್ಯೋಡ್, ಮುಂಬಯಿ ತೀಯಾ ವೆಲ್ಫ಼ೇರ್ ಅಸೋಷಿಯೇಶನಿನ ಅಧ್ಯಕ್ಶ ರೂಪೇಶ್ ರಾವ್, ಉಳ್ಳಾಲ ಚಿರುಂಬಾ ಭಗವತೀ ತೀಯಾ ಸಮಾಜದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ಶ್ರೀ ಭಗವತೀ ಎಜ್ಯುಕೇಶನ್ ಟ್ರ್ರಸ್ಟ್ ಉಚ್ಹಿಲದ ದಿನಕರ್ ಉಳ್ಳಾಲ್, ಕಾಸರಗೋಡು ಎಸ್. ಎನ್. ಡಿ.ಪಿ. ಜಿಲಾಧ್ಯಕ್ಷ  ಕೆ. ನಾರಾಯಣ, ಉದ್ಯಾವರ ತೀಯಾ ಸಮಾಜದ ಅಧ್ಯಕ್ಷ ನೀಲಯ್ಯ ಮೇಸ್ತ್ರಿ, ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಮೊಕ್ತೇಸರ ಲತಾ ರವೀಂದ್ರ, ಸಾಹಿತಿ ಬಿ. ಎಂ. ರೋಹಿಣಿ ಕುಡುಪು ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ತೀಯಾ ಸಮುದಾಯದ ಹದಿನೆಂಟು ಕ್ಷೇತ್ರಗಳ ಪ್ರಮುಖರು, ಹಾಗೂ ನಾರಾಯಣ ಕೆ. ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು,

 

ಭಾರತೀಯ ತೀಯಾ ಸಮಾಜದ ಅಧ್ಯಕ್ಷ ಸದಾಶಿವ ಉಳ್ಳಾಲ್ ಸ್ವಾಗತಿಸಿದರು. ಪುಸ್ಕಳ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಜನಾರ್ಧನ್ ಅವರು ವಂದಿಸಿದರು.

Group Photo with Gurikaras

 

Advertisements

About TWA

I want to help people by guides and tutorials for their problems

Posted on August 8, 2012, in Uncategorized. Bookmark the permalink. 2 Comments.

  1. Belchada Bhaskar

    Why our Thiya Samaj Bombay is not invided for this big function in Mangalore. Has Bharitya Thiya Samaj committe not send them invitation. This is sad and not ethical.

  2. Yes…. Special Invitations were sent to them. They are the best people to reply to your query.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: