Kannada News


News in Kannada will be posted on this page. Members are requested to paste the matter on word document format along with photographs and send it to roopeshrao@gmail.com. The news will be edited and posted in Thiya Samachara and this page immediately.

 

ನರಕ ಯಾತನೆಯಿಂದ ಈ ಬಾಲೆಗೆ ಮುಕ್ತಿ ಕೊಡಿ: ನೆರವಾಗುವಿರಾ ಸಹೃದಯಿಗಳೇ ?

 

 

Description: http://www.gulfkannadiga.com/images/news/70496.jpg

ನರಕ ಯಾತನೆಯಿಂದ ಈ ಬಾಲೆಗೆ ಮುಕ್ತಿ ಕೊಡಿ

ನೆರವಾಗುವಿರಾ ಸಹೃದಯಿಗಳೇ ?

ಮಂಜೇಶ್ವರ,ಜು.27:ಯೌವ್ವನಕ್ಕೆ ಕಾಲಿಡುವ ಸಂಭ್ರಮದಲ್ಲಿದ್ದ ಹುಡುಗಿಯೋರ್ವಳ ದಾರುಣ ಕಥೆಯಿದು.ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿ,ಉನ್ನತ ವಿದ್ಯಾಭ್ಯಾಸಕ್ಕಾಗಿ ಸಿದ್ಧತೆ ನಡೆಸುತ್ತಿರುವಾಗಲೇ ತನ್ನ ಶಿರದಲ್ಲಿ ದಿಡೀರನೆ ಉದ್ಭವಿಸಿದ ಗಡ್ಡೆಯೊಂದು ಆಕೆಯ ಬಾಳನ್ನೇ ಕಸಿದುಕೊಂಡಿದೆ.ವಿಧಿಯ ವಿಪರ್ಯಾಸವೆಂಬಂತೆ ಇದೀಗ ಅ ಹುಡುಗಿ ನರಕ ಸದೃಶ ಜೀವನವನ್ನು ಸಾಗಿಸುತ್ತಿದ್ದಾಳೆ.

 

ಮಂಜೇಶ್ವರ ಸಮೀಪದ ವರ್ಕಾಡಿ ಪಂಚಾಯತಿನ ಕೆದುಂಬಾಡಿ ನಿವಾಸಿ,ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಪೂವಪ್ಪ ಬೆಳ್ಚಪಾಡ-ಚಂದ್ರಾವತಿ ದಂಪತಿಯ ಪುತ್ರಿ ಪವಿತ್ರಾ(16) ಇಂದು ತನ್ನ ಶಿರದ ಮೇಲಿನ ಬೃಹದಾಕಾರದ ಗೆಡ್ಡೆಯ ಭಾರವನ್ನು ಹೊರಲಾಗದೆ ಚಡಪಡಿಸುತ್ತಿದ್ದಾಳೆ.

 

ಕುಂಜತ್ತೂರಿನ ಸರಕಾರಿ ಹೈಯ್ಯರ್ ಸೆಕೆಂಡರಿ ಶಾಲೆಯಲ್ಲಿ ಕಲಿಯುತ್ತಿದ್ದ ಸಂಧರ್ಭದಲ್ಲಿ ಪವಿತ್ರಾ ಕಲಿಕೆಯಲ್ಲೂ ಮುಂದಿದ್ದಳು.ಒಮ್ಮೆ ತನ್ನ ತಲೆಯಲ್ಲೊಂದು ಹುಬ್ಬು ಕಾಣಿಸಿಕೊಂಡಿದ್ದು, ಅದು ದಿನೇ ದಿನೇ ಬೆಳೆಯತೊಡಗಿದಾಗ ಸ್ಥಳೀಯ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದುಕೊಂಡಿದ್ದರು.ಕ್ರಮೇಣ ಅದು ದಿನೇ ದಿನೇ ಬೆಳೆಯತೊಡಗಿತು.

 

ತಂದೆ ತಾಯಿ ಅದೆಷ್ಟೋ ಚಿಕಿತ್ಸೆಯನ್ನು ಮಾಡಿದರೂ ಫಲಕಾರಿಯಾಗಲಿಲ್ಲ.ಕಿತ್ತು ತಿನ್ನುವ ಬಡತನ ಮಧ್ಯೆ ತಮ್ಮ ಮಗಳು ಗುಣಮುಖಳಾಗಬೇಕೆಂಬ ಹಂಬಲಿಕೆಯಿಂದ ಪುತ್ರಿಯ ಚಿಕಿತ್ಸೆಗಾಗಿ ಸರ್ವಸ್ವವನ್ನು ಮುಡಿಪಾಗಿಟ್ಟರು.ಕಳೆದ ಡಿಸೆಂಬರ್ ನಲ್ಲಿ ಪವಿತ್ರಾಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅ ಬಳಿಕ ಎಂದಿನಂತೆ ಪವಿತ್ರಾ ಗುಣಮುಖಲೂ ಆದಳು. ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನೂ ಬರೆದಳು.

Description: http://www.gulfkannadiga.com/images/news/70496_1.jpg

 

ಆದರೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲು ಸೂಚನೆಯನ್ನಿತ್ತಿದ್ದರೂ ಕಿತ್ತು ತಿನ್ನುವ ಬಡತನ ಅಡ್ಡಿ ಬಂತು.ಈಗಾಗಲೇ ಮಾಡಿದ ಚಿಕಿತ್ಸೆಯ ಸಾಲವನ್ನು ಭರಿಸಲಾಗದೆ ಪಿಯುಸಿ ಕಲಿಯುತ್ತಿರುವ ಇನ್ನೋರ್ವ ಪುತ್ರನೂ ವ್ಯಾಸಂಗವನ್ನು ಮೊಟಕುಗೊಳಿಸಿ ತಂದೆಯ ಜೊತೆ ಕೂಲಿ ಕೆಲಸಕ್ಕೆ ಹೋಗ ತೊಡಗಿದನು.

 

ಶಸ್ತ್ರಕ್ರಿಯೆಯ ಬಳಿಕ ತಕ್ಕ ಮಟ್ಟಿಗೆ ಪವಿತ್ರಾ ಸುಧಾರಿಸಿಕೊಂಡಿದ್ದರೂ,ಸ್ವಲ್ಪ ಸಮಯದ ಬಳಿಕ ತಲೆಯ ಹಿಂಭಾಗದಿಂದ ಗೆಡ್ಡೆ ಮತ್ತೆ ಸೃಷ್ಟಿಗೊಂದು ಬೆಳೆಯತೊಡಗಿತು.ಕಾಲ ಕಳೆದಂತೆ ಗೆಡ್ಡೆಯ ಗಾತ್ರ ಹಿರಿದಾಗುತ್ತಲೇ ಹೋಯಿತು.ತಮ್ಮ ಕಣ್ಮುಂದೆಯೇ ತಮ್ಮ ಪುತ್ರಿಯ ತಲೆಯಲ್ಲಿ ಗೆಡ್ಡೆಯೂ ಬೆಳೆಯತೊಡಗಿ ರಕ್ತ ಸ್ರಾವಗೊಳ್ಳತೊಡಗಿದಾಗ ತಂದೆ, ತಾಯಿ ಕಂಗಾಲಾದರು.ನಾಗದೋಷ, ಗ್ರಹದೋಷದಿಂದ ಹೀಗಾಗಿದೆಯೆಂದು ಯಾರೋ ಹೇಳಿ ಸ್ವಲ್ಪ ಕಾಲ ಅದರ ಹಿಂದೆ ತೆರಳಿ ಬಳಿಕ ಅದರಲ್ಲಿಯೂ ಫಲಶ್ರುತಿ ಕಾಣದೆ,ಬೆಂಗಳೂರಿಗೆ ಕೊಂಡೊಯ್ಯಲು ದುಡ್ಡಿಲ್ಲದೆ ಈ ಕುಟುಂಬ ಇದೀಗ ಪರಿತಪಿಸತೊಡಗಿದೆ.ತಲೆಯ ಮೇಲಿನ ಗೆಡ್ಡೆಯ ಭಾರ ಹೊರಲಾಗದೆ,ಅಪಾರ ನೋವನ್ನು ಹಿಸಲಾಗದೆ, ಪವಿತ್ರಾ ಮೌನ ಯಾತನೆ ಅನುಭವಿಸುತ್ತಿದ್ದಾಳೆ.

 

ನೋವನ್ನು ಸಹಿಸಲಾಗುತ್ತಿಲ್ಲ, ತಲೆಯನ್ನು ಮೇಲೆತ್ತಲಾಗುತ್ತಿಲ್ಲ ಎಂದು ಗೋಡೆಗೆ ಒರಗಿಕೊಂಡು ಪವಿತ್ರಾ ಖುದ್ದಾಗಿ ಹೇಳುತ್ತಿದ್ದಾಳೆ. ಬದುಕಿನ ಬಗ್ಗೆ ಅಗಾಧವಾದ ಕನಸನ್ನು ಹೊಂದಿದ್ದ ಆ ಬಾಲೆ, ಇದೀಗ ಗುಡಿಸಲಿನಂತಿರುವ ಪುಟ್ಟ ಸೂರಿನೊಳಗೆ ಎದ್ದು ನಿಲ್ಲಲಾಗದೆ,ಕೂರಲಾಗದೆ,ಮಲಗಿ ನಿದ್ರಿಸಲಾಗದೆ,ನರಕಯಾತನೆಯನ್ನು ಅನುಭವಿಸುತ್ತಿದ್ದಾಳೆ. ಪವಿತ್ರಾಳ ದಯನೀಯ ಸ್ಥಿತಿಯನ್ನು ಕಂಡರೆ ಎಂತಹ ಹೃದಯವೂ ಮರುಗಬಹುದು.ಏನೊಂದೂ ಅರಿಯದ ಆ ಮುಗ್ದ ಹುಡುಗಿಯ ದಾರುಣ ಕಥೆ ದಿನ ಕಳೆದಂತೆ ಭಯಾನಕವಾಗುತ್ತಿದೆ.

 

“ಸರ್ಕೋಮ ಸ್ಕಲ್” ಎಂಬ ಅಪರೂಪದ ಮೆದುಳಿನ ಕ್ಯಾನ್ಸರ್ ಇದಾಗಿದ್ದು, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಕೊಡದಿದ್ದರೆ ಇದು ಅಪಾಯಕಾರಿಯೆಂದು ಪವಿತ್ರಾಳಿಗೆ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.ಒಂದು ಹೊತ್ತಿನ ತುತ್ತಿಗೂ ಪರಿತಪಿಸುವ ಈ ಬಡ ಕುಟುಂಬಕ್ಕೆ ಚಿಕಿತ್ಸೆಯ ವೆಚ್ಚ ಭರಿಸುವುದು ಕನಸಿನ ಮಾತು.

ನೆರವಾಗುವಿರಾ?

ಪವಿತ್ರಾಳಿಗೆ ಈ ಯಾತನಾ ಲೋಕದಿಂದ ಮುಕ್ತಿ ದೊರೆಯಬೇಕಾದರೆ ಸಹೃದಯರ ನೆರವು ಅತ್ಯಗತ್ಯ.ಹೃದಯವಂತ ದಾನಿಗಳು,ಸಂಘ ಸಂಸ್ಥೆಗಳು ಸ್ಪಂದಿಸಿ ನೆರವಾದರೆ ಪವಿತ್ರಾಳು ಸ್ವಲ್ಪ ಮಟ್ಟಿಗೆ ಪುನಶ್ಚೇತನಗೊಳ್ಳುವುದರಲ್ಲಿ ಸಂದೇಹವಿಲ್ಲ.

 

ನೆರವಾಗುವವರು. ಚಂದ್ರಾವತಿ, w / ೦ ಪೂವಪ್ಪ ಬೆಳ್ಚಪಾಡಕೆದುಂಬಾಡಿ ಮನೆಅಂಚೆ ಪಾವೂರು,ಮಂಜೇಶ್ವರಕಾಸರಗೋಡು ಜಿಲ್ಲೆ,ಕೇರಳ :671323

(ಅಕೌಂಟ್ ನಂಬ್ರ 90007664283 ನಾರ್ತ್ ಮಲಬಾರ್ ಬ್ಯಾಂಕ್ಪಾವೂರ್ ಬ್ರಾಂಚ್ ) ಈ ವಿಳಾಸಕ್ಕೆ ನೆರವನ್ನು ಕಳಿಸಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ : 09447287098

ಉಪ್ಪಳಶ್ರೀಭಗವತೀಕ್ಷೇತ್ರಒತ್ತೆಕೋಲಮಹೋತ್ಸವ

ಉಪ್ಪಳ : ಕಾಸರಗೋಡು ಜಿಲ್ಲೆಯ ಉಪ್ಪಳ ಶ್ರೀ ಭಗವತೀ ಕ್ಷೇತ್ರದ ವತಿಯಿಂದ ವಿಷ್ಣುಮೂರ್ತಿ ಒತ್ತೆಕೋಲ ಮಹೋತ್ಸವವು ಸತ್ಯನಾರಾಯಣ ಮಾಹಾಪೂಜೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳೊಂದೆಗೆ ವಿಜ್ರಂಭಣೆಯಿಂದ ಜರಗಿತು.  ತೀಯಾ ಸಮುದಾಯದ 18 ಕ್ಷೇತ್ರಗಳ ಇತಿಹಾಸದಲ್ಲಿ ಪ್ರಥಮವಾಗಿ ವಿವಿಧ ಕ್ಷೇತ್ರಗಳ ಸುಮಾರು 17 ಮಂದಿ ಹಿರಿಯ ಅಚ್ಚಮ್ಮಾರರನ್ನು ಶ್ರೀ ಕ್ಷೇತ್ರದ ವತಿಯಿಂದ ಗೌರವ ಧನವನ್ನು ನೀಡಿ ಸನ್ಮಾನಿಸಲಾಯಿತು. ಸುಮಾರು ಒಂದೂವರೆ ದಶಕಗಳ ನಂತರ ನಡೆದ ಈ ಒತ್ತೆಕೋಲ ಮಹೋತ್ಸವ ದಲ್ಲಿ ಹತ್ತು ಸಾವಿರಕ್ಕೂ ಮಿಕ್ಕಿ ಊರ, ಪರಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.ಸಂಜೆ ಸುಕುಮಾರ ಯು. ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಂಬಯಿಯ ಉದ್ಯಮಿ ಕೃಷ್ಣ ಎನ್. ಉಚ್ಚಿಲ್ ಉಪಸ್ಥಿತರಿದ್ದರು. ಮುಂಬಯಿಯ ಇನ್ನೋರ್ವ ಉಧ್ಯಮಿ ಜಯ ಸಾಲ್ಯಾನ್,ಪತ್ರಕರ್ತ ಈಶ್ವರ ಎಂ. ಐಲ್ ಮುಂತಾದವರು ಅಂದಿನ ಅಚ್ಚಮ್ಮಾರರ ಸನ್ಮಾನ ಕಾರ್ಯಕ್ರಮದಲ್ಲಿ ಭಗವಹಿಸಿದ್ದರು.

This slideshow requires JavaScript.

Praveen Shankar B.M. Memorial Gramina Krida Kuttha 2012.

Praveen Shankar B M Krida Kutha


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: